ಹನೂರು: ಮಹದೇಶ್ವರಬೆಟ್ಟದ ಹುಲಿಗೂಡಿನಲ್ಲಿ ಮನೆಯಲ್ಲಿ ನಗದು ಕಳವು: ₹2.56 ಲಕ್ಷ ನಗದು ಲೂಟಿ
ಹನೂರು, ತಾಲೂಕಿನ ಮಲೆ ಮಹದೇಶ್ವರಬೆಟ್ಟದ ಹುಲಿಗೂಡಿ ಪ್ರದೇಶದ ಅಂಗಡಿಗೆ ಜೋಡಿಸಿಕೊಂಡಿದ್ದ ಮನೆಗೆ ಕಳ್ಳರು ನುಗ್ಗಿ ರೂ 2,ಲಕ್ಷ 56ಸಾವಿರ ರೂ ನಗದನ್ನು ಕಳವು ಮಾಡಿದ ಘಟನೆ ನಡೆದಿದೆ. ಸುಳ್ವಾಡಿ ಗ್ರಾಮದ ಸಂತೋಷ್ ಎಂಬುವವರು ಮಹದೇಶ್ವರಬೆಟ್ಟಕ್ಕೆ ಮಹದೇವಸ್ವಾಮಿ ಎಂಬುವವರ ಜಾಗವನ್ನು ಬಾಡಿಗೆಗೆ ಪಡೆದು, ತಗಡಿನಿಂದ ನಿರ್ಮಿಸಿದ ಅಂಗಡಿ ಮತ್ತು ಮನೆಯೊಂದನ್ನು ಕಟ್ಟಿಸಿಕೊಂಡು ವಾಸಿಸುತ್ತಿದ್ದಾರೆ. ಹಬ್ಬದ ಪ್ರಯುಕ್ತ ಕುಟುಂಬದೊಂದಿಗೆ ಊರಿಗೆ ತೆರಳಿದ್ದ ವೇಳೆ, ಕಳ್ಳರು ಮನೆಯ ಬಾಗಿಲಿನ ಬೀಗವನ್ನು ಮುರಿದು ಒಳ ನುಗ್ಗಿ ನಗದು ಕಳವು ಮಾಡಿ ಪರಾರಿಯಾಗಿದ್ದಾರೆ.ಈ ಸಂಬಂಧ ಸಂತೋಷ್ ಅವರು ಮಹದೇಶ್ವರ ಬೆಟ್ಟ ಠಾಣೆಗೆ ದೂರು ಸಲ್ಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ