ಹುಮ್ನಾಬಾದ್: ನಗರದಲ್ಲಿ ಘಟಸ್ಥಾಪನೆ ಸಸಿಗಳ ವಿಸರ್ಜನೆಯೊಂದಿಗೆ ನವರಾತ್ರಿ ಉತ್ಸವಕ್ಕೆ ತೆರೆ ಎಳೆದ ಭಕ್ತಾದಿಗಳು
ನಗರದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಪ್ರತಿ ಮನೆಮನೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಘಟನೆ ಸಸಿಗಳನ್ನು ಗಂಗೆಯಲ್ಲಿ ವಿಸರ್ಜಿಸುವ ಮೂಲಕ ಉತ್ಸವಕ್ಕೆ ತೆರೆ ಎಳೆದರು. ಇಲ್ಲಿಗೆ ಸಮೀಪದ ಮಾಣಿಕ್ ನಗರದ ಮಾಣಿಕ್ ಸರೋವರದಲ್ಲಿ ಶುಕ್ರವಾರ ಬೆಳಗ್ಗೆ 10ಕ್ಕೆ ಅಪಾರ ಸಂಖ್ಯೆಯ ಭಕ್ತಾದಿಗಳು ಸಸಿಗಳನ್ನು ಕಂಡುಬಂತು. ಈ ವೇಳೆ ಸಸಿ ವಿಸರ್ಜನೆಯ ಮಹತ್ವ ಕುರಿತು ವಿಕಾಸ್ ಜೋಶಿ ಅವರು ಮಾಹಿತಿ ನೀಡಿದರು.