ದಾಂಡೇಲಿ: ಟೌನಶಿಪ್ ಫೈಝಲ್ ಮಸೀದಿ ಹತ್ತಿರದ ಮನೆಯೊಂದರಲ್ಲಿ ಅವಿವಾಹಿತ ವ್ಯಕ್ತಿ ನೇಣಿಗೆ ಶರಣು
ದಾಂಡೇಲಿ : ನಗರದ ಟೌನಶಿಪ್ ಫೈಝಲ್ ಮಸೀದಿ ಹತ್ತಿರದ ಮನೆಯೊಂದರಲ್ಲಿ ಅವಿವಾಹಿತ ವ್ಯಕ್ತಿ ನೇಣಿಗೆ ಶರಣಾಗಿರುವ ಬಗ್ಗೆ ಭಾನುವಾರ ಸಂಜೆ 6.30 ಗಂಟೆ ಸುಮಾರಿಗೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ. ದಾವಲಸಾಬ ಅಲ್ಲಾಸಾಬ ಇಟಗಿ (ವ.39) ಎಂಬಾತನೇ ನೇಣಿಗೆ ಶರಣಾದ ಅವಿವಾಹಿತ ವ್ಯಕ್ತಿಯಾಗಿದ್ದಾನೆ. ಮಾಹಿತಿ ಪ್ರಕಾರ ಈತ ಮೃತಪಟ್ಟು ಎರಡ್ಮೂರು ದಿನ ಆಗಿರಬಹುದೆಂದು ಅಂದಾಜಿಸಲಾಗಿದೆ. ಈತ ಮನೆಯಲ್ಲಿ ಏಕಾಂಗಿಯಾಗಿ ವಾಸವಾಗಿದ್ದನು. ಹಾಗಾಗಿ ಈತ ನೇಣಿಗೆ ಶರಣಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ಭಾನುವಾರ ಸಂಜೆ ಈತನ ಮನೆಯಿಂದ ಗಬ್ಬು ವಾಸನೆ ಬಂದ ನಂತರ ನೇಣಿಗೆ ಶರಣಾಗಿ ಮೃತಪಟ್ಟಿರುವ ವಿಚಾರ ಗಮನಕ್ಕೆ ಬಂದಿದೆ.