ಹಳಿಯಾಳ: ಟಿಪ್ಪರ್-ಸ್ಕೂಟಿ ಡಿಕ್ಕಿ; ಮಹಿಳೆ ಸಾವು, ಇಬ್ಬರು ಮಕ್ಕಳು ಸೇರಿ ಮೂವರಿಗೆ ಗಂಭೀರ ಗಾಯ
ಹಳಿಯಾಳ ತಾಲೂಕಿನ ಮಲವಡಿ ಗ್ರಾಮದ ಬಳಿ ಸೋಮವಾರ ಸಂಜೆ 6ರ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಟಿಪ್ಪರ್ ಲಾರಿ ಮತ್ತು ಸ್ಕೂಟಿ ನಡುವೆ ಡಿಕ್ಕಿಯಾಗಿ ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿ, ಇಬ್ಬರು ಮಕ್ಕಳು ಸೇರಿ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಂಭವಿಸಿದೆ. ದಾಂಡೇಲಿಯ ನವಗ್ರಾಮದ ನಾಗರಾಜ ಶಾಬಣ್ಣ ಕಾಂಬಳೆ ಎಂಬುವವರು ಚಲಾಯಿಸುತ್ತಿದ್ದ ಬೂದಿ ಸಾಗಾಟದ ಟಿಪ್ಪರ್, ಮಲವಡಿ ಗ್ರಾಮದ ನಿವಾಸಿ ಸುವರ್ಣ ಅಂತ್ರೋಳಕರ (30) ಅವರು ಚಲಾಯಿಸುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಕೂಟಿಯಲ್ಲಿ ಸುವರ್ಣ ಅವರೊಂದಿಗೆ ಹಿಂಬದಿಯಲ್ಲಿ ಶೋಬಾ ಮಾರುತಿ ಕಶೀಲಕರ (38) ಮತ್ತು ಅವರ ಇಬ್ಬರು ಪುಟ್ಟ ಮಕ್ಕಳು - ಆರುಶ (5) ಹಾಗೂ ಗೋಕುಳ (3) - ಪ್ರಯಾಣಿಸುತ್ತಿದ್ದರು.