ಗದಗ: ರಾಜ್ಯ ಸರ್ಕಾರ ಹಿಂದೂ ಏಕತೆಗೆ ಧಕ್ಕೆ ತಂದಿದೆ: ನಗರದಲ್ಲಿ ಜಿ.ಬ್ರಾ.ಸ.ಅ ವೆಂಕಟೇಶ ಕುಲಕರ್ಣಿ
Gadag, Gadag | Sep 16, 2025 ಹಿಂದೂ ಧರ್ಮದಲ್ಲಿ ಕ್ರಿಶ್ಚಿಯನ್ ಧರ್ಮವನ್ನು ಎಳೆದು ತಂದು ರಾಜ್ಯ ಸರ್ಕಾರ ಹಿಂದೂಗಳ ಏಕತೆ ಮತ್ತು ಅಖಂಡತೆಗೆ ಧಕ್ಕೆ ತರುವ ಕೆಲಸವನ್ನು ಮಾಡುತ್ತಿದೆ. 46 ಜಾತಿಗಳ ಕಾಲಂ ನಲ್ಲಿ ಕ್ರಿಶ್ಚಿಯನ್ ಅಂತ ಸೇರಿಸಲಾಗಿದೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಮತಾಂತಗೊಂಡವರು ಮತಾಂತರಗೊಂಡ ಧರ್ಮವನ್ನೆ ಸೇರಿಸಬೇಕು. ಯಾವುದೇ ಕಾರಣಕ್ಕೂ ಮೂಲ ಧರ್ಮ ಸೇರಿಸಬಾರದು ಅಂತ ಜಿಲ್ಲಾ ಬ್ರಾಹ್ಮಣ ಸಮಾಜದ ಅಧ್ಯಕ್ಷ ವೆಂಕಟೇಶ ಕುಲಕರ್ಣಿ ಹೇಳಿದರು.