ಬೆಂಗಳೂರು ಉತ್ತರ: ಡಾ. ಕೆ. ಸುಧಾಕರ್ ಉಪಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ಕೇಂದ್ರ ರೇಷ್ಮೆ ಮಂಡಳಿಯ 143ನೇ ಸಭೆ
ಇಂದು ಬೆಂಗಳೂರಿನಲ್ಲಿ ನಡೆದ ಕೇಂದ್ರ ರೇಷ್ಮೆ ಮಂಡಳಿಯ 143ನೇ ಮಂಡಳಿ ಸಭೆಯಲ್ಲಿ ಭಾರತದ ರೇಷ್ಮೆ ವಲಯದ ಅಭಿವೃದ್ಧಿ, ರೈತರ ಹಿತಾಸಕ್ತಿ ಹಾಗೂ ಉದ್ಯಮದ ವಿಸ್ತರಣೆ ಕುರಿತಂತೆ ಮಹತ್ವದ ಚರ್ಚೆಗಳು ನಡೆಯಿತು.ಸಭೆಯಲ್ಲಿ ಮಾನ್ಯ ಸಂಸದರಾದ ಶ್ರೀ ಜಿ. ಲಕ್ಷ್ಮೀನಾರಾಯಣ, ಶ್ರೀ ರಾಧಾಕೃಷ್ಣ, ಶ್ರೀ ಜಿ. ಸೆಲ್ವನ್, ಮಾಜಿ ಸಚಿವರು ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದರಾದ ಡಾ. ಕೆ. ಸುಧಾಕರ್, ಜೊತೆಗೆ ಕೇಂದ್ರ ಜವಳಿ ಸಚಿವಾಲಯ ಮತ್ತು ರೇಷ್ಮೆ ಮಂಡಳಿಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ರೈತರ ಅಭಿವೃದ್ಧಿ, ಉದ್ಯಮದ ವಿಸ್ತರಣೆ ಹಾಗೂ ರೇಷ್ಮೆ ಉತ್ಪಾದನೆಗೆ ಹೊಸ ತಂತ್ರಜ್ಞಾನಗಳ ಅಳವಡಿಕೆ ಕುರಿತು ನಿರ್ಣಾಯಕ ಮಾತುಕತೆಗಳು ನಡೆದವು.