ಕೊಲ್ಹಾರ: ಕೂಡಗಿ ಗ್ರಾಮದಲ್ಲಿ ಶಾಲಾ ಶಿಕ್ಷಕಿ ವರ್ಗಾವಣೆ ಖಂಡಿಸಿ, ಶಿಕ್ಷಕಿಯನ್ನು ತಬ್ಬಿಕೊಂಡು ಬಿಕ್ಕಿ-ಬಿಕ್ಕಿ ಅತ್ತ ವಿದ್ಯಾರ್ಥಿಗಳು
ಪ್ಲೀಸ್ ನಮ್ಮನ್ನು ಬಿಟ್ಟು ಹೋಗ್ಬೆಡಿ,ನಿಮ್ಮನ್ನ ನಾವು ಬಿಟ್ಟಿರಲ್ಲ,ಅಪ್ಪಿಕೊಂಡು,ಕಂಬನಿಯಿಟ್ಟು ನಮ್ಮನ್ನು ಬಿಟ್ಟು ಹೋಗ್ಬೇಡಿ ಎಂದು ವಿದ್ಯಾರ್ಥಿಗಳು ಕಣ್ಣೀರಿ ಹಾಕುತ್ತಿರುವ ದೃಶ್ಯ ಕಂಡು ಬಂದಿದೆ ಇಷ್ಟಕ್ಕೂ ಮಕ್ಕಳ ಈ ರೋಧನೆಗೆ ಕಾರಣ ಶಿಕ್ಷಕಿಯ ವರ್ಗಾವಣೆ. ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಕೂಡಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಅಚ್ಚುಮೆಚ್ಚಿನ ಶಿಕ್ಷಕಿ ಪ್ರತಿಭಾ ತೊರವಿ ಹಠಾತ್ ಬೇರೆ ಶಾಲೆಗೆ ವರ್ಗಾವಣೆ ಸುದ್ದಿ ತಿಳಿದು, ಸೋಮವಾರ ಬೆಳಗ್ಗೆ 10ಗಂಟೆ ಬೆಳಗಿನ ಪ್ರಾರ್ಥನೆ ವೇಳೆ ಮಕ್ಕಳು ಕಣ್ಣೀರಿಡಲು ಶುರುಮಾಡಿದರು.ತಮ್ಮ ಪಾಠ ಹೇಳಿಕೊಡುವಷ್ಟೇ ಅಲ್ಲದೆ ಬದುಕು ಹೇಗೆ ಸಾಗಿಸಬೇಕು ಎಂದು ಹೃದಯಸ್ಪರ್ಶಿ ಪಾಠಗಳನ್ನು ಕಲಿಸಿದ್ದ ಶಿಕ್ಷಕಿ ನಮ್ಮನ್ನು ಬಿಟ್ಟು ಹೋಗುತ್ತಿದ್ದಾರೆ ಇಂದು ಕಣ್ಣೀರು ಸುರಿಸಿದರು.