ತೀರ್ಥಹಳ್ಳಿ: ಪಟ್ಟಣದಲ್ಲಿ ದಸರಾ ಹಿನ್ನಲೆ ಕೆಸರುಗದ್ದೆ ಓಟ: ಯುವಕ ಯುವತಿಯರಿಂದ ಭರ್ಜರಿ ಸ್ಟೆಪ್ಸ್
ಮಲೆನಾಡಿನ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ದಸರಾ ಹಬ್ಬದ ಹಿನ್ನೆಲೆ ಕೆಸರುಗದ್ದೆ ಓಟ, ಹಗ್ಗ-ಜಗ್ಗಾಟ ಸೇರಿದಂತೆ ವಿವಿಧ ಕ್ರೀಡಾ ಕೂಟವನ್ನು ಭಾನುವಾರ ಏರ್ಪಡಿಸಲಾಗಿತ್ತು ತೀರ್ಥಹಳ್ಳಿ ತಾಲೂಕು ಆಡಳಿತ ವತಿಯಿಂದ ಇದೇ ಮೊದಲ ಬಾರಿಗೆ ಮಹಿಳಾ ದಸರಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕೆಸರುಗದ್ದೆ ಓಟದಲ್ಲಿ ಮಹಿಳೆಯರು ಮಕ್ಕಳು ಯುವಕ ಯುವತಿಯರು ಸ್ಪರ್ಧಿಸುವ ಮೂಲಕ ಕ್ರೀಡೆಯನ್ನ ಆನಂದಿಸಿದರು.