ಇಳಕಲ್: ಶಕ್ತಿದೇವತೆಯ ಆರಾಧನೆಯ ಪುಣ್ಯಕಾಲವೇ ನವರಾತ್ರಿ ; ನಗರದಲ್ಲಿ ಮಾಜಿ ಶಾಸಕ ಡಿಜಿ ಪಾಟೀಲ
Ilkal, Bagalkot | Sep 30, 2025 ಪ್ರಪಂಚಕ್ಕೆ ದುಷ್ಟರಿಂದ ತೊಂದರೆಯಾದಾಗ ದೇವಿಯು ೯ ಅವತಾರಗಳನ್ನು ತಾಳಿ, ದುಷ್ಟ ರಾಕ್ಷಸರನ್ನು ಸಂಹಾರ ಮಾಡಿ, ಶಿಷ್ಟರನ್ನು ಕಾಪಾಡಿದ್ದಾಳೆ, ಇಂತಹ ಶಕ್ತಿದೇವತೆಯ ಆರಾಧನೆಯ ಪುಣ್ಯಕಾಲವೇ ನವರಾತ್ರಿಯಾಗಿದೆ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು. ಬಾಗಲಕೋಟ ಜಿಲ್ಲೆಯ ಇಳಕಲ್‌ದ ಮುನವಳ್ಳಿಪೇಟೆಯ ಶ್ರೀ ಹಳೇ ಬನಶಂಕರಿ ದೇವಸ್ಥಾನದಲ್ಲಿ ೯ ನೇ ದಿನದ ನವರಾತ್ರಿ ಅಂಗವಾಗಿ ಸೆ.೩೦ ಮುಂಜಾನೆ ೯ ಗಂಟೆಗೆ ದುರ್ಗಾದೇವಿ ಹೋಮ ಹವನದಲ್ಲಿ ಪಾಲ್ಗೊಂಡು ಮಾತನಾಡಿದರು. ಮಾಜಿ ಶಾಸಕರನ್ನು ಅರ್ಚಕರು ಹಾಗೂ ದೇವಸ್ಥಾನ ಜಿರ್ಣೋದ್ದಾರ ಸಮಿತಿಯ ಪದಾಧಿಕಾರಿಗಳು ಸತ್ಕರಿಸಿ ಗೌರವಿಸಿದರು. ಶ್ಯಾಮಸುಂದರ ಕರವಾ, ಗೋವಿಂದ ಕರವಾ, ಕಮಲ ವರ್ಮಾ, ರಾಮನಗೌಡ ಮುನವಳ್ಳಿ, ಪವನ ಕರವಾ, ಜಗದೀಶ ಸುಕ್ಲಾ, ಮೋಹಿನಿ ಕರವಾ ಮತ್ತು ಶ್ರೀ ಅನ್ನಪೂ