ಶ್ರೀರಂಗಪಟ್ಟಣ: ಗಂಜಾಮ್ ನಲ್ಲಿ ಸಮೀಕ್ಷೆಗೆ ಬಂದ ಗಣತಿದಾರನ ಮೇಲೆ ಮುಸ್ಲಿಂ ಕುಟುಂಬದ ದೌರ್ಜನ್ಯ ಆರೋಪ
ಸಮೀಕ್ಷೆಗೆ ಬಂದ ಗಣತಿದಾರನ ಮೇಲೆ ಮುಸ್ಲಿಂ ಕುಟುಂಬದ ದೌರ್ಜನ್ಯ ಎಸಗಿರುವ ಘಟನೆ ಜರುಗಿದೆ. ಗಣತಿಯ ಸಮೀಕ್ಷೆಯ ಘೋಷಣಾ ಪತ್ರ ಹರಿದು ದೌರ್ಜನ್ಯ, ದಬ್ಬಾಳಿಕೆ ಎಸಗಲಾಗಿದೆ ಎಂದು ಗಣತಿದಾರ ಜನಾರ್ಧನ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಗಣತಿದಾರನ ಬಳಿ ಕೆಲ ದಾಖಲೆ ಕಿತ್ತು ವಾಪಸ್ಸು ಕಳಿಸಿರುವ ಕುಟುಂಬ, ಮನೆ ಬಳಿ ಹೋದ ಗಣತಿದಾರ ಜನಾರ್ಧನ ಎಂಬುವರಿಗೆ ಅವಾಚ್ಯ ಶಬ್ದ ಬಳಸಿ ಕುಟುಂಬದ ವ್ಯಕ್ತಿಯಿಂದ ದರ್ಪ ಎಸಗಲಾಗಿದೆ. ಮನೆಯ R.R ನಂ ಹಾಗೂ ರೇಷನ್ ಕಾರ್ಡ್ ಬಗ್ಗೆ ಮಾಹಿತಿ ಕೇಳಿದ್ದಕ್ಕೆ ಗಣತಿ ದಾರನ ಮೇಲೆ ಮುಸ್ಲಿಂ ಕುಟುಂಬ ರಂಪಾಟ ಮಾಡಿದೆ. ಗಲಾಟೆಯ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಮೇಲ್ವಿಚಾರಕಗೂ ಅವಾಜ್ ಹಾಕಿ ವಾಪಸ್ಸು ಕಳುಹಿಸಿದೆ.