ಕಲಘಟಗಿ ತಾಲ್ಲೂಕಿನ ಸಂಗಮೇಶ್ವರ ಹಾಗೂ ಹಟಗಿನಾಳ ಕ್ರಾಸ್ ಬಳಿಯ ಪತ್ರಿಗಿಡದ ಹತ್ತಿರ ಕಲಘಟಗಿ-ಹಳಿಯಾಳ ಮಾರ್ಗದ ರಸ್ತೆಯಲ್ಲಿ ಭಾನುವಾರ ಬೆಳಿಗ್ಗೆ 11 ಗಂಟೆಗೆ ಚಿರತೆಯೊಂದು ರಸ್ತೆಯಲ್ಲಿ ಕಾಣಿಸಿಕೊಂಡಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ವಾಹನ ಸವಾರರು ರಸ್ತೆ ಮೂಲಕ ತೆರಳುವಾಗ ಚಿರತೆ ರಸ್ತೆ ದಾಟುತ್ತಿರುವದು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.