ಹುಲಸೂರ: ಭಾರಿ ಮಳೆಗೆ ಅಪಾರ ಹಾನಿ; ಗೌರ್, ಖಂಡಾಳ ಸೇರಿದಂತೆ ವಿವಿಧ ಗ್ರಾಮಗಳಿಗೆ ಶಾಸಕ ಶರಣು ಸಲಗರ್ ಭೇಟಿ, ಪರಿಶೀಲನೆ
Hulsoor, Bidar | Sep 27, 2025 ಇಂದು ನನ್ನ ಮತಕ್ಷೇತ್ರದ #ಗೌರ್, #ಖಂಡಾಳ, #ಗುತ್ತಿ ಮತ್ತು #ಮಿರಖಲ್ ಗ್ರಾಮಗಳಿಗೆ ಭೇಟಿ ನೀಡಿ ಹಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಹಾನಿಗೊಳಗಾದ ರೈತರ ಹೊಲಗಳಿಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಆಗಿರುವ ಹಾನಿಯನ್ನು ಪರಿಶೀಲಿಸಿ ನೀರಿನಿಂದ ತುಂಬಿರುವ ಬ್ರಿಡ್ಜ್, ರಸ್ತೆ ಗಳನ್ನು ಸ್ಥಳದಲ್ಲಿಯೇ ಜೆಸಿಬಿ ತರೆಸಿ ಖಾಲಿ ಮಾಡಿಸಲಾಯಿತು. ಜೊತೆಗೆ ಸ್ಥಳದಲ್ಲಿದ್ದ ಅಧಿಕಾರಿಗಳ ಜೊತೆ ಚರ್ಚಿಸಿ ಆಗಿರುವ ಹಾನಿಯನ್ನು ರೈತರಿಗೆ ಯಾವುದೇರೀತಿಯ ಅನ್ಯಾಯ ಆಗದಹಾಗೆ ಸರಿಯಾದ ರೀತಿಯಲ್ಲಿ ಪರಿಶೀಲಿಸಿ ಸೂಕ್ತ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಸೂಚಿಸಿದೆ.