ಬೇಲೂರು: ಪಟ್ಟಣದಲ್ಲಿ ಗಣೇಶ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿದ ಪ್ರಕರಣ ಮುಸುಕು ದಾರಿ ಮಹಿಳೆಯ ಸಿಸಿಟಿವಿ ದೃಶ್ಯ ಪೊಲೀಸ ರಿಗೆ ಲಭ್ಯ
Belur, Hassan | Sep 21, 2025 ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿದ ಪ್ರಕರಣ: ಮುಸುಕುದಾರಿ ಮಹಿಳೆ ದೇವಸ್ಥಾನಕ್ಕೆ ಎಂಟ್ರಿ ಕೊಟ್ಟಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ ಹಾಸನ: ಬೇಲೂರು ಪಟ್ಟಣದ ಗಣೇಶ ದೇವಾಲಯದಲ್ಲಿ ಅನಾಮಿಕ ಮಹಿಳೆ ಮುಖಕ್ಕೆ ಕಪ್ಪು ವೇಲ್ ಸುತ್ತಿಕೊಂಡು ಒಳನುಗ್ಗಿರುವ ಸಿಸಿಟಿವಿ ವಿಡಿಯೋ ಲಭ್ಯವಾಗಿದ್ದು, ಆರೋಪಿ ಪತ್ತೆಗೆ ಪೊಲೀಸರಿಗೆ ಸಹಾಯಕವಾಗಿದೆ. ಗಣೇಶನ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿರುವ ಘಟನೆ ಜಿಲ್ಲೆಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆರೋಪಿಯ ಬಗ್ಗೆ ಪೊಲೀಸರು ಸುಳಿವು ಪತ್ತೆಹಚ್ಚಿದ್ದಾರೆ. ಶೀಘ್ರದಲ್ಲೇ ಬಂಧನವಾಗಲಿದೆ ಎನ್ನಲಾಗುತ್ತಿದೆ.