ಮೊಳಕಾಲ್ಮುರು: ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಹಿನ್ನೆಲೆ, ಪಟ್ಟಣದಲ್ಲಿ ಹೂವು ವ್ಯಾಪಾರದ ಭರಾಟೆ ಜೋರು
ಮೊಳಕಾಲ್ಮುರು:-ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ಮೊಳಕಾಲ್ಮುರು ಪಟ್ಟಣದಲ್ಲಿ ಹೂವು ವ್ಯಾಪಾರದ ಭರಾಟೆ ಜೋರಾಗಿತ್ತು. ಈ ಹಬ್ಬದಲ್ಲಿ ವಾಹನಗಳು, ಯಂತ್ರಗಳು ಮತ್ತು ಕಚೇರಿಗಳು, ಮಾರಾಟ ಮಳಿಗೆಗಳಿಗೆ ಪೂಜೆ ಸಲ್ಲಿಸಲು ಹೂಗಳು,ಬಾಳೆ ಕಂದು ಮತ್ತು ನಿಂಬೆಹಣ್ಣನ್ನು ಬಳಸಲಾಗುವುದು ಹೀಗಾಗಿ, ಇವುಗಳಿಗೆ ಬೇಡಿಕೆ ಹೆಚ್ಚಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಪಟ್ಟಣದಲ್ಲಿ ಚಂಡು ಹೂ, ಸೇವಂತಿಗೆ ಹೂ ಸೇರಿದಂತೆ ತರಹೇವಾರಿ ಹೂಗಳು ರಾಶಿ ರಾಶಿ ಆಗಿ ಮಾರಾಟವಾಗುತ್ತಿದ್ದು ಕಂಡುಬಂದಿತು.