ಕೊಳ್ಳೇಗಾಲ: ಧನಗೆರೆ ಬಳಿ ಬೈಕ್ ನಿಯಂತ್ರಣ ತಪ್ಪಿ ಬಿದ್ದ ಇಬ್ಬರಿಗೆ ಪೆಟ್ಟು
ಮೊಳ ಗಳೇ ವಾಲ ತಾಲೂಕಿನ ಧನಗೆರೆ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ಬೈಕ್ ನಿಯಂತ್ರಣ ತಪ್ಪಿ ಬಿದ್ದು ಇಬ್ಬರಿಗೆ ಪೆಟ್ಟಾಗಿರುವ ಘಟನೆ ನಡೆದಿದೆ. ಕೆಎ 10 ಇಜಿ 8092 ಸಂಖ್ಯೆದ್ದ ಟೂ ವೀಲರ್ ಮಳವಳ್ಳಿ ಕಡೆಯಿಂದ ಕೊಳ್ಳೇಗಾಲ ಕಡೆಗೆ ಬರುತ್ತಿದ್ದ ವೇಳೆ ಧನಗೆರೆ ಗ್ರಾಮದ ಹತ್ತಿರದ ರಸ್ತೆ ಡುಬ್ಬಿಯಲ್ಲಿ ನಿಯಂತ್ರಣ ತಪ್ಪಿ ಉರುಳಿದೆ. ಈ ಅಪಘಾತದಲ್ಲಿ ಕೊಂಬುಡುಕ್ಕಿ ಗ್ರಾಮದ ಮಾದೇಶ್ ಮತ್ತು ಅರಬಗೆರೆ ಗ್ರಾಮದ ಮಲ್ಲೇಶ್ ಎಂಬಾತರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೂಡಲೇ ಕೊಳ್ಳೇಗಾಲ ಉಪ ವಿಭಾಗದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ