ಗುಂಡ್ಲುಪೇಟೆ: ಹಂಗಳ ಸಮೀಪ ಕಾರು ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವು
ಥವೆರಾ ಕಾರು ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಅಸುನೀಗಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಹಂಗಳ ಸಮೀಪ ಭಾನುವಾರ ನಡೆದಿದೆ. ಹಂಗಳ ಗ್ರಾಮದ ಬೈಕ್ ಸವಾರ ಮನು ಸ್ಥಳದಲ್ಲಿ ಮೃತಪಟ್ಟ ದುರ್ದೈವಿ. ಬೊಮ್ಮಲಾಪುರದ ಗ್ರಾಮದ ಚಾಲಕ ಸೇರಿ ಮೂವರು ಕಾರಿನಲ್ಲಿ ತೆರಳುತ್ತಿದ್ದಾಗ ಬೈಕ್ ಗೆ ಮುಖಾಮುಖಿ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ. ಅಪಘಾತ ಆಗುತ್ತಿದ್ದಂತೆ ಕಾರಿನಲ್ಲಿದ್ದ ಓರ್ವ ಪರಾರಿಯಾಗಿದ್ದು ಇಬ್ಬರು ಕಾರಿನಲ್ಲೇ ಇದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಎರಡೂ ವಾಹನಗಳನ್ನು ಗುಂಡ್ಲುಪೇಟೆ ಪೊಲೀಸರು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.