ಅಜ್ಜಂಪುರ: ಪಟ್ಟಣದಲ್ಲಿ ಓವರ್ ಹೆಡ್ ಟ್ಯಾಂಕ್ ತೆರವು ವೇಳೆ ತಪ್ಪಿದ ಭಾರಿ ದುರಂತ, ಸಾವಿನ ದವಡೆಯಿಂದ ಇಬ್ಬರು ಜಸ್ಟ್ ಮಿಸ್! VIDEO ನೋಡಿ
ಪಟ್ಟಣ ಪಂಚಾಯ್ತಿ ಮಾಡಿದ ಒಂದೇ ಒಂದು ಮಹಾ ಎಡವಟ್ಟಿನಿಂದಾಗಿ ಇಬ್ಬರು ಸಾವಿನ ದವಡೆಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಪಟ್ಟಣದಲ್ಲಿ ನಡೆದಿದೆ. ಅಜ್ಜಂಪುರ ಪಟ್ಟಣದ ಬುಕ್ಕಾಂಬುದಿ ರಸ್ತೆಯಲ್ಲಿದ್ದ ಹಳೆಯ ಶಿಥಿಲಾವಸ್ಥೆಯಲ್ಲಿದ್ದ ಓವರ್ ಹೆಡ್ ಟ್ಯಾಂಕ್ ಕೆಡವುವ ವೇಳೆ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಕೆಡವಿದ್ದು. ಇಬ್ಬರು ಸಾವಿನಿಂದ ಪಾರಾಗಿದ್ದಾರೆ.