ಮಹಿಳೆಗೆ ಖಾಸಗಿ ಅಂಗ ತೋರಿಸಿ ಅಶ್ಲೀಲ ವರ್ತನೆ ನಡೆಸಿದ ವಿಚಾರವನ್ನು ಪ್ರಶ್ನಿಸಿದ್ದಕ್ಕೆ ದಂಪತಿಯ ಮನೆಗೆ ನುಗ್ಗಿ 30ಕ್ಕೂ ಹೆಚ್ಚು ಪುಂಡರು ದಾಂದಲೆ ನಡೆಸಿದ ಘಟನೆ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮರಿಯಣ್ಣ ಪಾಳ್ಯದಲ್ಲಿ ನಡೆದಿದೆ. ಡಿ. 14ರಂದು ಆರೋಗ್ಯ ಶ್ಯಾಮ್ ಮತ್ತು ಪುಷ್ಪರಾಣಿ ದಂಪತಿ ಅಂಗಡಿಗೆ ಹೋಗುತ್ತಿದ್ದ ವೇಳೆ ಬೈಕ್ನಲ್ಲಿ ಬಂದ ಕಾರ್ತಿಕ್ ಎಂಬ ಯುವಕ ಪುಷ್ಪರಾಣಿ ಮುಂದೆ ನಿಂತು ಪ್ಯಾಂಟ್ ಜಿಪ್ ತೆರದು ಖಾಸಗಿ ಅಂಗ ತೋರಿಸಿದ್ದಾನೆ ಎನ್ನಲಾಗಿದೆ. ಇದನ್ನು ಪ್ರಶ್ನಿಸಿದ ದಂಪತಿ ಮನೆಗೆ ಮರಳಿದ್ದರು. ಬಳಿಕ ತನ್ನ ಗ್ಯಾಂಗ್ ಕಟ್ಟಿಕೊಂಡು ಬಂದ ಕಾರ್ತಿಕ್ ಮನೆಗೆ ನುಗ್ಗಲು ಯತ್ನಿಸಿ ಬ್ಯಾಟ್, ಮಚ್ಚುಗಳ ಮೂಲಕ ಕಿಟಕಿ ಗಾಜು, ಬಾಗಿಲು, ಸಿಸಿಟಿವಿ ಧ್ವಂಸಗೊಳಿಸಿದ್ದಾನೆ.