ಪುತ್ತೂರು: ಪುರುಷರಕಟ್ಟೆಯಲ್ಲಿ ಮೊಬೈಲ್ ಟವರ್ ಗೆ ಆಳವಡಿಸಲಾಗಿದ್ದ ಬ್ಯಾಟರಿಗಳ ಕಳವು ಮಾಡಿದ ವ್ಯಕ್ತಿ ಅರೆಸ್ಟ್
ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನರಿಮೊಗರು ಗ್ರಾಮದ ಪುರುಷರಕಟ್ಟೆ ಎಂಬಲ್ಲಿ ಮೊಬೈಲ್ ಟವರ್ ಗೆ ಅಳವಡಿಸಿದ್ದ ಬ್ಯಾಟರಿಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಅ ಕ್ರ: 79/2025 ಕಲಂ: 331(3), 331(4), 305 BNS 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿ, ಆರೋಪಿ ಕೇರಳದ ಕೊಲ್ಲಂ ನಿವಾಸಿ ಇಟ್ಟಿ ಫನಿಕ್ಕರ್ (60) ಎಂಬಾತನನ್ನು ದಸ್ತಗಿರಿ ಮಾಡಿ ವಿಚಾರಣೆ ನಡೆಸಲಾಗಿ, ಕಳವುಗೈದ ಬ್ಯಾಟರಿಗಳನ್ನು ಸ್ವಾಧೀನಪಡಿಸಲಾಗಿದೆ. ಆರೋಪಿತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.