ಕಮಲನಗರ: ಕಮಲ್ನಗರ್ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಅಕ್ರಮ ಸಾಗಿಸುತಿದ್ದ ಪಡಿತರ ಅಕ್ಕಿ ಜಪ್ತಿ
ಸರ್ಕಾರದಿಂದ ಬಡವರಿಗೆ ಉಚಿತವಾಗಿ ವಿತರಿಸುವ ಸಂಬಂಧ ಬಿಡುಗಡೆ ಮಾಡಲಾದ ಪಡಿತರ ಅಕ್ಕಿಯನ್ನು ಕಾಳಸಂತಿಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹ ಮಾಡಿ ಸಾಗಾಟ ಮಾಡುತಿದ್ದ ಆರೋಪದ ಮೇಲೆ 8ಕ್ವಿಂಟಲ್ ಅಕ್ಕಿ ಭಾನುವಾರ ಬೆಳಿಗ್ಗೆ 11ಕ್ಕೆ ಜಪ್ತಿ ಮಾಡಿಕೊಳ್ಳಲಾಗಿದೆ. ಎಸ್ ಪಿ ಪ್ರದೀಪ್ ಒಂಟಿ ಅವರ ನಿರ್ದೇಶನದ ಮೇರೆಗೆ ತಾಲೂಕು ಪಂಚಾಯಿತಿ ಇ. ಓ ಮಾಣಿಕರಾವ್ ಪಾಟೀಲ್, ಆಹಾರ ನಿರೀಕ್ಷಕ ಶಿವಾನಂದ್, ಪಿಎಸ್ಐ ಆಶಾ ದಾಳಿ ನಡೆಸಿದ್ದಾರೆ.