ಶ್ರೀರಂಗಪಟ್ಟಣ: ಹಿರಳಹಳ್ಳಿ ಗ್ರಾಮದಲ್ಲಿ ಚಿರತೆ ಉಪಟಳ, ನಾಯಿ ಹೊತ್ತೊಯ್ದ ಚಿರತೆ
ಕೆ. ಆರ್. ಪೇಟೆ ತಾಲೂಕಿನ ಹಿರಳಹಳ್ಳಿ ಗ್ರಾಮದಲ್ಲಿ ಚಿರತೆ ಉಪಟಳ, ನಾಯಿ ಹೊತ್ತೊಯ್ದ ಚಿರತೆ ಕೆ.ಆರ್.ಪೇಟೆ ತಾಲೂಕಿನ ಹಿರಳಹಳ್ಳಿ ಗ್ರಾಮದಲ್ಲಿ ಚಿರತೆಯ ಉಪಟಳ ನಿಲ್ಲುತ್ತಿಲ್ಲ. ಅ.10ರಂದು ಜಯರಾಮ್ ಎಂಬುವರ ಮನೆಯ ಮುಂದೆ ಕಟ್ಟಿದ್ದ ಸಾಕು ನಾಯಿಯನ್ನು ಚಿರತೆ ಎಳೆದೊಯ್ದಿದೆ. ಈ ಘಟನೆ ವಿಡಿಯೋ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಿರಂತರ ಚಿರತೆ ಉಪಟಳದಿಂದ ಗ್ರಾಮಸ್ಥರು ಆತಂಕಗೊಂಡಿದ್ದು, ಚಿರತೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ ಆಗ್ರಹಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ