ನೆಲಮಂಗಲ: ಸೋಲದೇವನಹಳ್ಳಿ ಬಳಿ ಎಂಟು ಪುಟಗಳ ಡೆತ್ ನೋಟ್ ಬರೆದು ನೇಣಿಗೆ ಶರಣಾದ ಪ್ರತಿಷ್ಠಿತ ಕಾಲೇಜಿನ ಯುವತಿ
ನೆಲಮಂಗಲ ಪ್ರತಿಷ್ಠಿತ ಕಾಲೇಜ್ ನಲ್ಲಿ ಬಿ ಫಾರ್ಮ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ 8 ಪುಟಗಳ ಡೆತ್ ನೋಟ್ ಬರೆದು ತಾನು ವಾಸವಾಗಿದ್ದ ಪಿಜಿಯಲ್ಲಿ ನೇಣಿಗೆ ಶರಣಾಗಿರುವ ಘಟನೆ ನೆಲಮಂಗಲ ಹೊರವಲಯದಲ್ಲಿ ನಡೆದಿದೆ. ಹೆಸರಘಟ್ಟ ಬಳಿಯ ಸೊಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪೆಟಲ್ಸ್ ಗರ್ಲ್ಸ್ ಪಿಜಿಯಲ್ಲಿ ಘಟನೆ ನಡೆದಿದ್ದು, ವತ್ಸಲಾ (19) ಯುವತಿ ನೇಣಿಗೆ ಶರಣಾಗಿದ್ದಾಳೆ, ಮೃತ ಯುವತಿ ಹಾಸನ ಮೂಲದವರಾಗಿದ್ದು, ಪ್ರತಿಷ್ಠಿತ ಕಾಲೇಜ್ ಒಂದರಲ್ಲಿ ಅಂತಿಮ ವರ್ಷ ಬಿಫಾರ್ಮ್ ವ್ಯಾಸಂಗ ಮಾಡುತ್ತಿದ್ದರು.