ರಾಯಚೂರು: ರಾಯಚೂರು : ಜೋಳ ಬೆಳೆದ ರೈತರಿಗೆ ಸಂಕಷ್ಟ ಹುಳುಗಳ ದಾಳಿ ಪರಿಹಾರದ ನಿರೀಕ್ಷೆಯಲ್ಲಿ ರೈತರು
ರಾಯಚೂರು ಜಿಲ್ಲೆಯಾದ್ಯಂತ ವರುಣನ ಆರ್ಭಟದಿಂದ ರೈತರು ಸಂಪೂರ್ಣವಾಗಿ ನೆಲುಗಿ ಹೋಗಿದ್ದಾರೆ. ಇದೀಗ ಜೋಳ ಬೆಳೆದ ರೈತರ ಸರದಿ. ಮಳೆಯಿಂದಾಗಿ ಸಾಕಷ್ಟು ಜೋಳ ಭೂಮಿಯಿಂದ ಮೇಲೆ ಎದ್ದಿರಲಿಲ್ಲ, ಕೆಲ ರೈತರ ಬೆಳೆ ಉತ್ತಮವಾಗಿ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದವರಿಗೆ, ಈಗ ಹುಳುಗಳ ದಾಳಿಯಿಂದ ಸಾಕಷ್ಟು ಸಮಸ್ಯೆ ಎದುರಾಗಿದೆ. ಸಂಪೂರ್ಣ ಬೆಳೆ ಕಳೆದುಕೊಳ್ಳುವ ಪರಿಸ್ಥಿತಿಗೆ ಬಂದು ತಲುಪಿದ್ದಾರೆ.