ಮುಳಬಾಗಿಲು: ಸೇತುವೆಗೆ ಲಾರಿ ಬಿದ್ದು ಸಂಪೂರ್ಣವಾಗಿ ಜಖಂ
Mulbagal, Kolar | Nov 30, 2025 ಮುಳಬಾಗಿಲು ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರ ನರಸಿಂಹ ತೀರ್ಥದ ಬಳಿ ನಿರ್ಮಾಣ ಹಂತದಲ್ಲಿರುವ ಕೆಳ ಸೇತುವೆಗೆ ರಾತ್ರಿ ವೇಳೆ ಲಾರಿ ಬಿದ್ದ ಪರಿಣಾಮ ಲಾರಿ ಸಂಪೂರ್ಣವಾಗಿ ಜಖಂಗೊಂಡಿದೆ. ಈ ದುರ್ಘಟನೆಯಲ್ಲಿ ಲಾರಿ ಚಾಲಕ ತೀವ್ರವಾಗಿ ಗಾಯಗೊಂಡಿದ್ದು, ಆತನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಮುಳಬಾಗಿಲು ಹೊರವಲಯದ ನ್ಯಾಯಾಲಯಗಳ ಸಂಕೀರ್ಣದ ಸಮೀಪ ನಡೆದಿದೆ. ವಾಹನ ಸಂಚಾರಕ್ಕೆ ಬಳಸಲಾಗುತ್ತಿದ್ದ ಹೆದ್ದಾರಿ ಮೇಲಿನ ಸರ್ವೀಸ್ ರಸ್ತೆಯಿಂದ ಲಾರಿ ಕೆಳ ಸೇತುವೆಗೆ ಬಿದ್ದಿದೆ.