ದಕ್ಷಿಣ ಕ್ಷೇತ್ರದ ಶಮಶೀರನಗರ ಬುದ್ಧವಿಹಾರ ಪರಿಸರದಲ್ಲಿ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. ಡಾ.ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಬಾಬಾಸಾಹೇಬರ ತತ್ವ, ಚಿಂತನೆ, ಸಂವಿಧಾನದ ಆಶಯ ಜಾರಿ ಕುರಿತು ಮಾತನಾಡಿದೆ. ಮೈಸೂರಿನ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ ಸೇರಿದಂತೆ ಪೂಜ್ಯ ಭಂತೆಜಿ, ದಲಿತ ಮುಖಂಡರು, ವಿವಿಧ ಸಮಾಜದ ಮುಖಂಡರು, ಗಣ್ಯರು, ಸ್ಥಳೀಯ ಪ್ರಮುಖರು ಹಾಜರಿದ್ದರು.