ದಾಂಡೇಲಿ: ನಗರದಲ್ಲಿ ಗಮನ ಸೆಳೆದ ಪ್ರೇಮ್ ಜಿ ಪ್ರೊಡಕ್ಷನ್ ಅರ್ಪೀಸಿದ "ನೆನಪಿನ ಅಲೆ" ನಾಟಕ ಪ್ರದರ್ಶನ
ದಾಂಡೇಲಿ : ಪ್ರೇಮ್ ಜಿ ಪ್ರೊಡಕ್ಷನ್ ಹಾಗೂ ಅಭಿಷೇಕ್ ಡ್ಯಾನ್ಸ್ ಅಕಾಡೆಮಿಯ ಆಶ್ರಯದಡಿ ಅಭಿಷೇಕ್ ಡ್ಯಾನ್ಸ್ ಅಕಾಡೆಮಿಯಲ್ಲಿ ಇಂದು ಭಾನುವಾರ ಸಂಜೆ 7:30 ಗಂಟೆ ಸುಮಾರಿಗೆ ಪ್ರದರ್ಶನಗೊಂಡ ನೆನಪಿನ ಅಲೆ" ಸುಂದರ ಸಾಮಾಜಿಕ ನಾಟಕ ನಾಟಕವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕಲಾವಿದ ಹಾಗೂ ನಾಟಕ ಮತ್ತು ಚಲನಚಿತ್ರ ನಟನೆಯ ತರಬೇತಿದಾರರಾಗಿರುವ ಧಾರವಾಡದ ವಿಠ್ಠಲರಾಜ್ ಅವರು ಬರೆದ ನೆನಪಿನ ಅಲೆ ನಾಟಕವು ಅವರದೇ ನಿರ್ದೇಶನದಲ್ಲಿ ಯಶಸ್ವಿಯಾಗಿ ಜರುಗಿತು. ಈ ನಾಟಕದಲ್ಲಿ ವಿಠ್ಠಲರಾಜ್ ಅವರಿಂದ ನಟನಾ ತರಬೇತಿಯನ್ನು ಪಡೆಯುತ್ತಿರುವ ಶಿಬಿರಾರ್ಥಿಗಳೇ ಅಭಿನಯಿಸಿರುವುದು ವಿಶೇಷವಾಗಿತ್ತು.