ಶಿವಮೊಗ್ಗ: ನಗರದಲ್ಲಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ₹1.84 ಲಕ್ಷ ಮೌಲ್ಯದ ಚಿನ್ನದ ಸರ ಕಸಿದುಕೊಂಡು ಯುವಕ ಪರಾರಿ
ATMನಲ್ಲಿ ಹಣ ಬಿಡಿಸುತ್ತಿದ್ದಾಗ ಒಳ ನುಗ್ಗಿದ ಯುವಕ ತನಗೆ 2 ಸಾವಿರ ರೂ. ಹಣ ಕೊಡುವಂತೆ ವ್ಯಕ್ತಿಯೊಬ್ಬರಿಗೆ ಬೇಡಿಕೆ ಇಟ್ಟಿದ್ದಾನೆ. ನಿರಾಕರಿಸಿದ್ದಕ್ಕೆ ವ್ಯಕ್ತಿ ಮೇಲೆ ಮನಸೋಯಿಚ್ಛೆ ಹಲ್ಲೆ ನಡೆಸಿ, ಪ್ರಕಾಶ್ ಎಂಬುವವರು ಕೊರಳಲಿದ್ದ 1.84 ಲಕ್ಷ ರೂ. ಮೌಲ್ಯದ ಚಿನ್ನದ ಸರ, ಡಾಲರ್ ಕಸಿದುಕೊಂಡು ಪರಾರಿಯಾಗಿದ್ದಾರೆ. ಆಟೋ ಚಾಲಕರು ಮತ್ತು ಸ್ಥಳೀಯರು ಪ್ರಕಾಶ್ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಗರ ರಸ್ತೆಯಲ್ಲಿರು ಎಸ್‌ಬಿಐ ಎಟಿಎಂನಲ್ಲಿ ಸೋಮವಾರ ರಾತ್ರಿ ಘಟನೆ ಸಂಭವಿಸಿದೆ.