ಶಿವಮೊಗ್ಗ: ಅ. 9ರಂದು ನಗರದಲ್ಲಿ ಮೆಸ್ಕಾಂ ಜನ ಸಂಪರ್ಕಸಭೆ
ಶಿವಮೊಗ್ಗ ನಗರ ಉಪ ವಿಭಾಗ ಒಂದು ಸರ್ವಜ್ಞ ವೃತ್ತದ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಮೆಸ್ಕಾಂ ಕಚೇರಿಯಲ್ಲಿ ಅಕ್ಟೋಬರ್ 9ರಂದು ಜನ ಸಂಪರ್ಕ ಸಭೆಯನ್ನು ಆಯೋಜಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ಪ್ರಕಟಣೆಯ ಮೂಲಕ ತಿಳಿಸಿರುತ್ತಾರೆ. ಅಕ್ಟೋಬರ್ 9ರಂದು ಮಿಸ್ಕಾಂಬನ ಹಿರಿಯ ಅಧಿಕಾರಿಗಳು ಗ್ರಾಹಕರಿಂದ ವಿದ್ಯುತ್ ಸಂಬಂಧಿತ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ವ್ಯಾಪ್ತಿಯ ಗ್ರಾಹಕರು ಸಭೆಯಲ್ಲಿ ಪಾಲ್ಗೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.