ಶೋರಾಪುರ: ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಪೈಪ್ ಲೈನ್ ಶಿಥಿಲಗೊಂಡಿದ್ದ ದುರಸ್ತಿ ಕಾರ್ಯ ಆರಂಭ
ಸುರಪುರ ತಾಲೂಕಿನ ದೇವಪುರ ಬಳಿಯ ಕೆಂಪಾಪುರ ಕೃಷ್ಣಾ ನದಿಯಿಂದ ಸುರಪುರ ನಗರಕ್ಕೆ ನಿರಂತರ ಕುಡಿಯುವ ನೀರು ಸರಬರಾಜು ಮಾಡುವ ಪೈಪ್ ಲೈನ್ ದೇವಪುರ ಗ್ರಾಮದ ಬಳಿಯ ಹಳ್ಳದಲ್ಲಿ ನೀರು ಸೋರಿಕೆಯಾಗುತ್ತಿರುವುದರಿಂದ ಕಳೆದ ನಾಲ್ಕು ದಿನಗಳಿಂದ ನಗರಕ್ಕೆ ಕುಡಿಯುವ ನೀರು ಸರಬರಾಜು ನಿಲ್ಲಿಸಲಾಗಿತ್ತು. ಬುಧವಾರ ಹಳ್ಳದಲ್ಲಿ ಭಾರಿ ಪ್ರಮಾಣದಲ್ಲಿ ನೀರಿದ್ದರೂ ನೀರಿನಲ್ಲಿಯೇ ಇಳಿದು ದುರಸ್ತಿ ಕಾರ್ಯವನ್ನು ನಡೆಸಲಾಗುತ್ತಿದ್ದು ಇದರಿಂದಾಗಿ ಸಾರ್ವಜನಿಕರಿಗೆ ಸಂತಸ ಉಂಟುಮಾಡಿದೆ. ನಗರದ ಜನ ನೀರಿಲ್ಲದೆ ಪರದಾಟವನ್ನು ನಡೆಸಿದ್ದು ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು ಮಾಡಲು ಆರಂಭಿಸಲಾಗಿದೆ.