ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಆಯುಕ್ತರಾದ ಕೆ.ಎನ್. ರಮೇಶ್ ರವರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ದಿನವಿಡೀ ತಪಾಸಣೆ ನಡೆಸಿದ್ದು, ಬುಧವಾರ ಮಧ್ಯಾಹ್ನ 3:30 ರ ಸುಮಾರಿಗೆ ಕೋರಮಂಗಲದಲ್ಲಿ ಸ್ಥಾಪಿಸಲಾಗಿರುವ ಕಸ-ರಸ ಘಟಕದ ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆಯಲ್ಲಿ ಈ ಘಟಕದಲ್ಲಿರುವ ಬಯೋಮೆಥನೈಸೇಷನ್ ಪ್ಲಾಂಟ್ ನಲ್ಲಿ ಘನತ್ಯಾಜ್ಯ ಸಂಸ್ಕರಣೆ ವಿಧಾನಗಳ ಕುರಿತು ಮಾಹಿತಿ ಪಡೆದರು. ಒಣ ಕಸ ಸಂಗ್ರಹಣಾ ಘಟಕದಲ್ಲಿ ಸಂಗ್ರಹಿಸಲಾಗಿದ್ದ ಒಣ ತ್ಯಾಜ್ಯಗಳಾದ ಹಳೆ ಬೆಡ್ಗಳು, ಚಪ್ಪಲಿಗಳು, ಕೆಟ್ಟುಹೋಗಿರುವ ಯಂತ್ರಗಳು, ಬಾಟಲಿಗಳು ಹಾಗೂ ಇನ್ನಿತರ ಒಣ ತ್ಯಾಜ್ಯಗಳ ವಿಲೇವಾರಿ ಕುರಿತಂತೆ ದಾಖಲೆಗಳನ್ನು ಪರಿಶೀಲಿಸಿದರು.