ಕರಾವಳಿ ಜೋಡುಕರೆ ಕಂಬಳ ಟ್ರಸ್ಟ್ ಆಶ್ರಯದಲ್ಲಿ ಕಾಂಗ್ರೆಸ್ ಮುಖಂಡ ಇನಾಯತ್ ಅಲಿ ಗೌರವಾಧ್ಯಕ್ಷತೆ ಯಲ್ಲಿ ಪ್ರಥಮ ವರ್ಷದ ಹೊನಲು ಬೆಳಕಿನ ಗುರುಪುರ ಕಂಬಳ ಶುಕ್ರವಾರ ಬೆಳಗ್ಗೆ ಆರಂಭಗೊಂಡಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತಾಡಿದ ಕಂಬಳ ಸಮಿತಿ ಕಾರ್ಯದರ್ಶಿ ಗುಣಪಾಲ ಕಡಂಬ ಅವರು, “ಸರ್ವ ಜಾತಿ ಧರ್ಮದ ಜನರನ್ನು ಬೆಸೆಯುವ ಏಕೈಕ ಕ್ರೀಡೆಯೆಂದಿದ್ದರೆ ಅದು ಕಂಬಳ ಮಾತ್ರ. ಗುರುಪುರ ಕಂಬಳದ ಮೂಲಕ ಸಾಮ ರಸ್ಯ ಬೆಸೆಯುವ ಕೆಲಸ ನಡೆದಿದೆ. ಮುಂದೆಯೂ ಈ ಕಂಬಳ ಇನ್ನಷ್ಟು ವಿಜೃಂಭಣೆಯಿಂದ ನಡೆಯಲಿ. ಜನರನ್ನು ಪರಸ್ಪರ ಬೆಸೆಯುವ ಕೆಲಸ ಇಲ್ಲಿಂದ ಆರಂಭವಾಗಲೆಂದು ಅವರು ಶುಭ ಹಾರೈಸಿದರು.