ಶಿವಮೊಗ್ಗ: ವಿದ್ಯಾನಗರದಲ್ಲಿ ಮತ್ತೆ ಚಡ್ಡಿ ಗ್ಯಾಂಗ್ ಪ್ರತ್ಯಕ್ಷ: ಸಿಸಿಟಿವಿಯಲ್ಲಿ ಚಡ್ಡಿ ಗ್ಯಾಂಗ್ ಸೆರೆ
ಶಿವಮೊಗ್ಗ ನಗರದಲ್ಲಿ ಮತ್ತು ಚಡ್ಡಿ ಕ್ಯಾಂಪ್ ಆಕ್ಟಿವ್ ಆಗಿದೆ ಶಿವಮೊಗ್ಗದ ವಿದ್ಯಾನಗರದ ಚಾನಲ್ ಏರಿಯಾದ ಬಡಾವಣೆಯ ಜಾನ್ ಎಂಬುವವರ ಮನೆಗೆ ಚಡ್ಡಿ ಗ್ಯಾಂಗ್, ಕಿಟಕಿ ಮೂಲಕ ಪ್ರವೇಶಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸರಿಯಾಗಿದೆ ಈ ಘಟನೆಯು ಮಂಗಳವಾರ ಮಧ್ಯರಾತ್ರಿ ಸಂಭವಿಸಿದ್ದು, ಬುಧವಾರ ಮಾಹಿತಿ ಲಭ್ಯವಾಗಿದೆ. ಚಡ್ಡಿ ಗ್ಯಾಂಗ್ ಮನೆಗೆ ನುಗ್ಗಿದ್ದ ವೇಳೆ ಜಾನ್ ಕುಟುಂಬದವರು ಮನೆಯಲ್ಲೇ ಇದ್ದರು ಆದರೆ ನಿದ್ರೆಗೆ ಜಾನ್ ಕುಟುಂಬ ಜಾರಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ ಮನೆಯ ಒಂದು ಕೋಣೆಯನ್ನ ಶೋಧ ನಡೆಸಿ ಏನು ಸಿಗದ ಹಿನ್ನೆಲೆ ಚಡ್ಡಿ ಗ್ಯಾಂಗ್ ವಾಪಸ್ ತೆರಳಿದೆ, ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.