ಕಾರವಾರ: ನಿರ್ದೇಶಕರ ನಿಯಂತ್ರಣವಿಲ್ಲದೆ ಕ್ರಿಮ್ಸ್ ಬಡವಾಗುತ್ತಿದೆ: ನಗರದಲ್ಲಿ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ಬೇಸರ
ನಗರದಲ್ಲಿ ಸೋಮವಾರ ಸಂಜೆ 6ಕ್ಕೆ ಹೇಳಿಕೆ ನೀಡಿರುವ ಇಲ್ಲಿನ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ಪ್ರಭಾರ ನಿರ್ದೇಶಕರಾದ ಡಾ.ಪೂರ್ಣಿಮಾ ಅವರಿಗೆ ಸಂಸ್ಥೆ ಹಾಗೂ ಸಂಸ್ಥೆಯ ಸಿಬ್ಬಂದಿಗಳ ಮೇಲೆ ಹಿಡಿತ ಇಲ್ಲದೇ ಕ್ರಿಮ್ಸ್ ದಿನ ಕಳೆದಂತೆ ಬಡವಾಗುತ್ತಿದೆ ಎಂದು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಹೇಳಿಕೆ ನೀಡಿದ್ದಾರೆ. ರಾಜ್ಯದ ಇಡೀ ಕರಾವಳಿಯಲ್ಲಿನ ಏಕೈಕ ಸರ್ಕಾರಿ ಮೆಡಿಕಲ್ ಕಾಲೇಜಾಗಿರುವ ಕ್ರಿಮ್ಸ್ ನ್ನು ಉಳಿಸಿಕೊಳ್ಳಬೇಕಿದ್ದವರೇ ಸಂಸ್ಥೆ ಬಗ್ಗೆ ನಿರ್ಲಕ್ಷ ತೋರುತ್ತಿದ್ದಂತೆ ಕಾಣುತ್ತಿದೆ ಎಂದು ಆರೋಪಿಸಿದ್ದಾರೆ. ಕಾಲೇಜಿನ ದಾಖಲಾತಿಯೂ ಇಳಿಯ ತೊಡಗಿದೆ, ಕೆಲವು ತಜ್ಞ ವೈದ್ಯರು ರಾಜೀನಾಮೆ ಕೊಟ್ಟು ಹೋಗಿದ್ದಾರೆ ಎಂದಿದ್ದಾರೆ