ಲಿಂಗಸೂರು: ವಿವಾದದ ಸುಳಿಯಲ್ಲಿ ಜಾಗ ಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರ
ಹಟ್ಟಿ ಪಟ್ಟಣದ ಪ್ರಾಥಮಿಕ ಆರೋಗ್ಯಕೇಂದ್ರವನ್ನು ಸಮುದಾಯ ಆರೋಗ್ಯಕೇಂದ್ರವಾಗಿ ಸರ್ಕಾರ ಮೇಲ್ದರ್ಜೆಗೇರಿಸಿ ಆದೇಶ ನೀಡಿದೆ. ಕಟ್ಟಡ ಕಟ್ಟಲು ಅನುದಾನ ನೀಡಿದೆ. ಆದರೇ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಹೊಂದಿರುವ ಜಾಗ ವಿವಾದದಲ್ಲಿರುವ ಪ್ರಕರಣ, ಕೋರ್ಟ್ನಲ್ಲಿ ಇರುವುದರಿಂದ ಕೇಂದ್ರದ ಕಟ್ಟಡ ಕಾಮಗಾರಿ ಕೆಲಸಕ್ಕೆ ಕಾನೂನು ತೊಡಕು ಆಗಿದೆ. ಟೆಂಡರ್ ಹಂತದಲ್ಲಿ ಕೇಂದ್ರಕ್ಕೆ ಭೂಮಿ ದಾನ ಮಾಡಿದವರ ಮಾಲೀಕತ್ವದ ವಿಷಯ ನ್ಯಾಯಾಲಯದ ಇರುವುದರಿಂದ ಹೊಸ ಕಟ್ಟಡ ಕಟ್ಟಲು ಸಾಧ್ಯವಾಗುತ್ತಿಲ್ಲ. ಇದರಿಂದ ನೂತನ ಕಟ್ಟಡಕ್ಕೆ ಅನುದಾನ ಬಂದರೂ ವ್ಯರ್ಥವಾಗುತ್ತಿದೆ.