ಕಲಬುರಗಿ: ದೆಹಲಿ ಬಾಂಬ್ ಸ್ಫೋಟ: ನಗರದ ರೈಲ್ವೆ ನಿಲ್ದಾಣದಲ್ಲಿ ಬಾಂಬ್ ನಿಷ್ಕ್ರಿಯ ದಳದಿಂದ ತೀವ್ರ ತಪಾಸಣೆ
ಕಲಬುರಗಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭೀಕರ ಸ್ಫೋಟ ಹಿನ್ನಲೆಯಲ್ಲಿ ಕಲಬುರಗಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಹೈ ಅಲರ್ಟ್ ಘೋಷಿಸಲಾಗಿದೆ.. ನ11 ರಂದು ಬೆಳಗ್ಗೆ 10.30 ಕ್ಕೆ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳ ತಂಡ ನಗರದ ರೈಲ್ವೆ ನಿಲ್ದಾಣದಲ್ಲಿ ತೀವ್ರ ತಪಾಸಣೆ ನಡೆಸುದ್ದಾರೆ.. ಪ್ರಯಾಣಿಕರ ಲಗೇಜ್, ವಿಶ್ರಾಂತಿ ಕೋಣೆ, ಟಾಯ್ಲೆಟ್ ರೂಂ, ಟಿಕೆಟ್ ಕೌಂಟರ್, ಲಗೇಜ್ ಕೌಂಟರ್ ಸೇರಿದಂತೆ ರೈಲ್ವೆ ನಿಲ್ದಾಣದ ಇಂಚಿಂಚು ಜಾಗ ಪರಿಶೀಲನೆ ನಡೆಸಿದ್ದಾರೆ.