ಗೋಕಾಕ: ಕಪರಟ್ಟಿ ಗ್ರಾಮದಲ್ಲಿ ಸಹೋದರನ ಸಾವಿನ ಸುದ್ದಿ ತಿಳಿದು ಅಣ್ಣನ ಸಾವು
ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಕಪರಟ್ಟಿ ಗ್ರಾಮದಲ್ಲಿ ಇಂದು ಶನಿವಾರ 1 ಗಂಟೆಗೆ ಮನಕಲುಕುವ ಘಟನೆ ನಡೆದಿದೆ ಸತೀಶ್ ಬಾಗನ್ನವರ (16) ಅನಾರೋಗ್ಯದ ಕಾರಣದಿಂದ ಮೃತನಾಗಿದ್ದನು ಆದರೆ ಈ ಸುದ್ದಿ ತಿಳಿದು ಅಣ್ಣ ಬಸವರಾಜ ಬಾಗನ್ನವರ (24)ಗೆ ಹೃದಯಘಾತವಾಗಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಬಸವರಾಜ ಬಾಗನ್ನವರ ಸಾವನ್ನಪ್ಪಿದ್ದಾನೆ ಇಬ್ಬರು ಮಕ್ಕಳನ್ನು ಕಳೆದುಕೊಂಡ ತಂದೆ - ತಾಯಿಗೆ ಆಘಾತವಾಗಿದ್ದು ಅಣ್ಣ ತಮ್ಮಂದಿರ ಸಾವಿಗೆ ಕಣ್ಣಿರಿಟ್ಟ ಕಪರಟ್ಟಿ ಗ್ರಾಮ ಜನ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತಿದ್ದ ಮೃತ ಸತೀಶ ಬಾಗನ್ನವರ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಮೃತ ಬಸವರಾಜ ಬಾಗನ್ನವರ ಮನೆಗೆ ಆಧಾರವಾಗಿದ್ದ ಮಕ್ಕಳನ್ನು ಕಳೆದುಕೊಂಡ ಹಿರಿಯ ಜೀವಿಗಳಿಗೆ ಬರ ಸಿಡಿಲು ಬಡೆದಂತಾಗಿದೆ ಈ ಸಾವು