ಮಂಡ್ಯ : ಪ್ರಜಾಪ್ರಭುತ್ವ ಗಟ್ಟಿ ಯಾಗಿರಬೇಕಾದರೆ ಮಾಧ್ಯಮ ರಂಗ ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು ಎಂದಿರುವ ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದ ನಾಥ ಸ್ಮಾಮೀಜಿ ಅವರು ಮಾಧ್ಯಮ ನೀಡುವ ಕೆಟ್ಟ ಸಂದೇಶ ಇಡೀ ಸಮಾಜಕ್ಕೆ ಮಾರಕವಾಗಲಿದೆ ಎಂದು ಎಚ್ಚರಿಸಿದರು. ಮಂಡ್ಯ ನಗರದ ಕೆ ವಿ ಶಂಕರೇ ಗೌಡ ಶತಮಾನೋತ್ಸವ ಭವನ ದಲ್ಲಿ ಭಾನುವಾರ ಸಂಜೆ 8.30 ರ ಸಮಯದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಹಾಗೂ ಜಿಲ್ಲಾ ಘಟಕದ ನೂತನ ಆಡಳಿತ ಮಂಡಳಿಯ ಅಧಿಕಾರ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಮಾಜದ ಹಿತ ರಕ್ಷಣೆ ಮಾಡುವ ಮಹತ್ತರ ಜವಾಬ್ದಾರಿ ಪತ್ರಕರ್ತರದಾಗಿದೆ ಎಂದು ಹೇಳಿದರು.