ಗೋಕಾಕಿನಲ್ಲಿ ಹಾಫ್ ಮ್ಯಾರಾಥಾನ್ ಆಯೋಜನೆ ಮಾಡಲಾಗಿದ್ದು ಇಂದು ರವಿವಾರ 7 ಗಂಟೆಗೆ ಮೈಸೂರು ರಾಜವಂಶಸ್ಥ ಹಾಗೂ ಸಂಸದ ಯದೂವೀರ ಒಡೆಯರ್ ಹಾಗೂ ಸ್ಥಳೀಯ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಸೇರಿ ಚಾಲನೆ ನೀಡಲಾಯಿತು ಗೋಕಾಕ ನಗರದಲ್ಲಿ ಪ್ರಪ್ರಥಮ ಬಾರಿಗೆ ರೋಟರಿ ಸಂಸ್ಥೆಯ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಮಟ್ಟದ ಗೋಕಾಕ ಹಿಲ್ ಹಾಫ್ ಮ್ಯಾರಾಥಾನಲ್ಲಿ ಭಾಗಿಯಾಗಿ ಯುವಕರಿಗೆ ಸ್ಪೂರ್ಥಿಯಾದರು ಇದೇ ಸಂದರ್ಭದಲ್ಲಿ ಹುಕ್ಕೇರಿ ಹಿರೇಮಠದ ಪೂಜ್ಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿಗಳು, ಕೊಣ್ಣುರು ಕಾಡಸಿದ್ದೇಶ್ವರಮಠ ಡಾ. ಪವಾಡೇಶ್ವರ ಮಹಾಸ್ವಾಮಿಗಳು, ಘೋಡಗೇರಿ ಶಿವಾನಂದ ಮಠ ಪೂಜ್ಯ ಶ್ರೀ ಮಲ್ಲಯ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು.