ರೈಲು ಹಳಿಯ ಮೇಲೆ ತೆರಳುತ್ತಿದ್ದ ಆರು ದನಗಳು ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಕಡ್ಡಿಮಟ್ಟಿ ರೈಲ್ವೇ ಸ್ಟೇಶನ್ ಸಮೀಪ ಗುಡ್ಡದ ತಿರುವಿನಲ್ಲಿ ಜರುಗಿದೆ. ಹುಬ್ಬಳ್ಳಿಗೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲಿನಡಿ ಸಿಲುಕಿ ಆರು ದನಗಳು ಸಾವನ್ನಪ್ಪಿದ್ದು,ಜಾನುವಾರುಗಳ ದೇಹಗಳು ಛಿದ್ರಛಿದ್ರವಾಗಿ ಬಿದ್ದಿವೆ.ಬಾಗಲಕೋಟೆ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.