ಚಿಕ್ಕಬಳ್ಳಾಪುರ: ಕರ್ನಾಟಕ ರಾಜ್ಯ ಆಯೋಗ ಅಧ್ಯಕ್ಷ ಕೃಷ್ಣಾ ರವರಿಂದ ನಗರದ ಸರ್ಕಾರಿ ಪ್ರೌಢಶಾಲೆ ಸೇಂಟ್ ಜೋಸೆಫ್ ಶಾಲೆಗೆ ಭೇಟಿ ವ್ಯವಸ್ಥೆ ಪರಿಶೀಲನೆ
ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷರಾದ ಡಾ. ಹೆಚ್. ಕೃಷ್ಣ ರವರು ಹಾಗೂ ಆಯೋಗದ ಸದಸ್ಯರು ಮಂಗಳವಾರ ಚಿಕ್ಕಬಳ್ಳಾಪುರ ನಗರದ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿ ಅಲ್ಲಿನ ಅಡುಗೆ ತಯಾರಿಸುವ ದಸ್ತಾನು, ಆಹಾರ ಮಾಡುವ ವಿಧಾನ, ಶುಚಿ ರುಚಿ, ಅಡುಗೆ ಕೊಠಡಿಯನ್ನು ಪರಿಶೀಲನೆ ಮಾಡಿ ಮಕ್ಕಳ ಜೊತೆ ಸಂವಾದ ನಡೆಸಿದರು. ನಂತರ ಸೆಂಟ್ ಜೋಸೆಫ್ ಶಾಲೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದರು.