ನರಗುಂದ: ನೇಣುಬಿಗಿದ ಸ್ಥಿತಿಯಲ್ಲಿ 5 ತಿಂಗಳ ಬಾಣಂತಿ ಶವ ಪತ್ತೆ : ನಗರದಲ್ಲಿ ಪತಿಯ ಕುಟುಂಬಸ್ಥರಿಂದ ಕೊಲೆ ಆರೋಪ!
Nargund, Gadag | Mar 6, 2025 ನೇಣುಬಿಗಿದ ಸ್ಥಿತಿಯಲ್ಲಿ 5 ತಿಂಗಳ ಬಾಣಂತಿ ಶವ ಪತ್ತೆ : ಪತಿಯ ಕುಟುಂಬಸ್ಥರಿಂದ ಕೊಲೆ ಆರೋಪ! ಗದಗ ಜಿಲ್ಲೆ ನರಗುಂದದಲ್ಲಿ 5 ತಿಂಗಳ ಬಾಣಂತಿ ಸಾವಾಗಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ಬಾಣಂತಿ ಪವಿತ್ರ (25) ಎನ್ನುವ ಬಾಣಂತಿಯ ಶವ ಪತ್ತೆಯಾಗಿದೆ. ಬಾಣಂತಿಯನ್ನು ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಕೇಳಿ ಬರುತ್ತಿದೆ. ಯೋಧ ಹಾಗೂ ಕುಟುಂಬದ ಸದಸ್ಯರ ವಿರುದ್ಧ ಈ ಒಂದು ಗಂಭೀರವಾದ ಆರೋಪ ಕೇಳಿ ಬಂದಿದ್ದು, ಗಂಡನ ಮನೆಗೆ ಬಂದ ಮೂರೇ ದಿನದಲ್ಲಿ ಪವಿತ್ರ ಕೊಲೆಯಾಗಿದೆ. ಪತಿ ಹರೀಶ್ ಕಲ್ಲಕುಟಿಕರ್ ಹಾಗೂ ಮಾವ ಮೂಕಪ್ಪ ಅತ್ತೆ ಸೋಮವ್ವ ವಿರುದ್ಧ ಮೃತಳ ಕುಟುಂಬಸ್ಥರು ಈ ಒಂದು ಆರೋಪ ಮಾಡುತ್ತಿದ್ದಾರೆ. ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದು ಘಟನೆ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.