ನರಗುಂದ: ಹುಣಸಿಕಟ್ಟಿ ಗ್ರಾಮದಲ್ಲಿ ಅಪರಿಚಿತ ವಾಹನ ಡಿಕ್ಕಿ - ಮೂವರು ಸಾವು, ಚಾಲಕ ಎಸ್ಕೆಪ್!
Nargund, Gadag | Mar 2, 2025 ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್ ನಲ್ಲಿ ಹೊರಟಿದ್ದ ಮೂವರು ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಹುಣಸಿಕಟ್ಟಿ ಗ್ರಾಮದ ಬಳಿ ಜರುಗಿದೆ. ನಿಂಗಪ್ಪ ಮಾದರ (35), ಯಮನಪ್ಪ ಮಾದರ (45) ಮತ್ತು ಮಂಜುನಾಥಗೌಡ ಮೃತ ದುರ್ದೈವಿಗಳು. ಇವರು ಗದಗ ಜಿಲ್ಲೆ ನರಗುಂದ ತಾಲೂಕಿನ ಹುಣಸಿಕಟ್ಟಿ ಗ್ರಾಮದ ನಿವಾಸಿಗಳು ಎನ್ನಲಾಗಿದೆ. ಮೂವರು ಒಂದೇ ಬೈಕ್ ನಲ್ಲಿ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ. ಬೈಕ್ ನಲ್ಲೇ ಹೊರಟಿದ್ದ ಮಂಜುನಾಥ್ ಗೌಡಗೆ ತೀವ್ರ ಗಾಯವಾಗಿತ್ತು. ಕೂಡಲೇ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಇನ್ನೂ ಅಪಘಾತದ ನಂತರ ಅಪರಿಚಿತ ವಾಹನದ ಸಮೇತ ಚಾಲಕ ಪರಾಗಿಧದಾನೆ.