ಔರಾದ್: ನಿವೇಶನದ ಡಿಜಿಟಲ್ ಖಾತಾ ಮಾಡಿಕೊಡಲು ₹12 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತರ ದಾಳಿ;ಧೂಪತಮಹಾಗಾಂವ ಪಿಡಿಓ ಹಾಗೂ ಇವರ ಪತಿ ಬಂಧನ
Aurad, Bidar | Nov 5, 2025 ಔರಾದ್: ನಿವೇಶನದ ಡಿಜಿಟಲ್ ಖಾತಾ ಮಾಡಿಕೊಡಲು ₹12 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರು ಬುಧವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಔರಾದ ತಾಲ್ಲೂಕಿನ ಧೂಪತಮಹಾಗಾಂವ ಗ್ರಾಮ ಪಂಚಾಯತ್ ಪಿಡಿಒ ಅನಿತಾ ರಾಠೋಡ್ ಸಿಕ್ಕಿ ಬಿದ್ದ ಅಧಿಕಾರಿ. ಧೂಪತಮಹಾಗಾಂವ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಜೀರ್ಗಾ(ಬಿ) ಗ್ರಾಮದ ರಾಜಕುಮಾರ್ ಪಾಟೀಲ್ ಎಂಬುವವರ ನಿವೇಶನದ ಡಿಜಿಟಲ್ ಖಾತಾ ಮಾಡಿಕೊಡಲು ಪಿಡಿಒ ಅನಿತಾ ಅವರು ₹12 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.