ನವಲಗುಂದ ನಗರದಲ್ಲಿ ಇಂದು ಸರ್ಕಾರದ ವತಿಯಿಂದ ನವಲಗುಂದ ತಾಲೂಕಾ ಆಡಳಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ ದಾಸಶ್ರೇಷ್ಠ ಶ್ರೀ ಕನಕದಾಸರ 2025ರ ಜಯಂತ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಶಾಸಕರಾದ ಎನ್.ಎಚ್.ಕೋನರಡ್ಡಿ ಅವರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಕೆ.ಎನ್. ಗಡ್ಡಿ, ಅಧಿಕಾರಿಗಳಾದ ನವಲಗುಂದ ತಹಶೀಲ್ದಾರ ಸುಧೀರ ಸಾವಕಾರ, ತಾಪಂ ಇಓ ಶ್ರೀಮತಿ ಭಾಗ್ಯಶ್ರೀ ಜಾಗಿರದಾರ, PSI ಜನಾರ್ಧನ ಬಟ್ರಳ್ಳಿ, ನವಲಗುಂದ ಪುರಸಭೆ ಸದಸ್ಯ ಜೀವನ ಪವಾರ, ಅಣ್ಣಿಗೇರಿ ತಾಪಂ ಮಾಜಿ ಅಧ್ಯಕ್ಷ ದೇವಪ್ಪ ರೋಣದ, ಯುವ ಕಾಗ್ರೇಸ್ ಅಧ್ಯಕ್ಷ ವಿಕಾಸ ತದ್ದೆವಾಡಿ ಸೇರಿದಂತೆ ಉಪಸ್ಥಿತಿ ಇದ್ದರು.