ದಾಂಡೇಲಿ : ನಗರದ ಅಂಬೇವಾಡಿಯ ಶ್ರೀ ನಾಗದೇವತಾ ಮಂದಿರದಲ್ಲಿ ಶ್ರೀ ನಾಗದೇವತಾ ಸಮಿತಿಯ ಆಶ್ರಯದಲ್ಲಿ 28ನೇ ವರ್ಷದ ವಾರ್ಷಿಕ ವರ್ಧಂತಿ ಉತ್ಸವ ಕಾರ್ಯಕ್ರಮವು ಶುಕ್ರವಾರ ಸಂಭ್ರಮ, ಸಡಗರ ಹಾಗೂ ಶ್ರದ್ಧಾಭಕ್ತಿಯಿಂದ ಜರುಗಿತು. ಮುಲ್ಕಿ ಕಾರ್ನಾಡಿನ ನಾಗಪಾತ್ರಿ ಹಯಗ್ರೀವ ಪಡ್ಡಿಲ್ಲಾಯರ ಪ್ರಧಾನ ಪೌರೋಹಿತ್ಯದಲ್ಲಿ ಪೂಜಾ ಕಾರ್ಯಕ್ರಮ ಜರುಗಿತು. ಬೆಳಗಿನಿಂದಲೆ ಪೂಜಾ ಕಾರ್ಯಕ್ರಮಗಳು ಆರಂಭಗೊಂಡಿತು. 108 ಬ್ರಹ್ಮಕಲಶಾಭಿಷೇಕ, ಪಂಚಾಮೃತ ಅಭಿಷೇಕ, ಆಶ್ಲೇಷ ಬಲಿ, ಉದ್ಯಾಪನ ಹೋಮ, ತುಲಾಭಾರ ಸೇವೆ ಜರುಗಿತು.