ಯಳಂದೂರು: ಪಟ್ಟಣದಲ್ಲಿ ಶಿಕ್ಷಕಿಯಿಂದ ವಿದ್ಯಾರ್ಥಿ ಮೇಲೆ ಹಲ್ಲೆ, ಎಫ್ಐಆರ್ ದಾಖಲು
ಚಾಮರಾಜನಗರ ಜಿಲ್ಲೆಯ ಯಳಂದೂರು ಪಟ್ಟಣದ ಖಾಸಗಿ ಶಾಲೆಯೊಂದರಲ್ಲಿ ವಿದ್ಯಾರ್ಥಿ ಮೂತ್ರ ವಿಸರ್ಜನೆಗೆ ಹೋಗಬೇಕೆಂದಕ್ಕೆ ಶಿಕ್ಷಕಿ ಥಳಿಸಿದ ಘಟನೆ ನಡೆದಿದೆ. ಐದನೇ ತರಗತಿ ವಿದ್ಯಾರ್ಥಿ ಮೇಲೆ ಶಿಕ್ಷಕಿ ಬಾನುಮತಿ ಹಲ್ಲೆ ಮಾಡಿದ್ದಾರೆ ಈ ಸಂಬಂಧ ಪೋಷಕರು ಯಳಂದೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಇವಾಗ ಶಿಕ್ಷಕಿ ಮೇಲೆ ಸಿಆರ್ ಪಿಸಿ ಕಲಂ 157 ರ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ