ಚಿಂಚೋಳಿ: ಚಿಂಚೋಳಿಯಲ್ಲಿ ಖೋಟಾ ನೋಟು ಚಲಾವಣೆ ಮಾಡ್ತಿದ್ದ ಮೂವರು ಖಧೀಮರ ಬಂಧನ
ಕಲಬುರಗಿ : ಕಲಬುರಗಿ ಜಿಲ್ಲೆ ಚಿಂಚೋಳಿಯಲ್ಲಿ ಖೋಟಾ ನೋಟು ಚಲಾವಣೆ ಮಾಡ್ತಿದ್ದ ಓರ್ವ ಅಪ್ರಾಪ್ತ ಬಾಲಕ ಆರೋಪಿ ಸಹಿತ ಮೂವರು ಖಧೀಮರನ್ನ ಪೊಲೀಸರು ಬಂಧಿಸಿರೋ ಘಟನೆ ನಡೆದಿದ್ದು, ಅ15 ರಂದು ಮಧ್ಯಾನ 12.30 ಕ್ಕೆ ಮಾಹಿತಿ ಲಭ್ಯವಾಗಿದೆ.. ಮಹ್ಮದ್ ಸಮೀರ್ ಮತ್ತು ಗೌಸ್ ಹಾಗೂ ಓರ್ವ ಅಪ್ರಾಪ್ತ ಬಾಲಕ ಸೇರಿಕೊಂಡು ಹೋಟೆಲ್ನಲ್ಲಿ 200, 500 ಮುಖಬೆಲೆಯ 10 ಸಾವಿದಷ್ಟು ಖೋಟಾ ನೋಟುಗಳನ್ನ ಚಲಾವಣೆ ಮಾಡ್ತಿದ್ದರು. ಅನುಮಾನಗೊಂಡ ಹೋಟೆಲ್ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಚಿಂಚೋಳಿ ಪೊಲೀಸರು ಮೂವರನ್ನ ಬಂಧಿಸಿದ್ದಾರೆ