ಹಿರಿಯೂರು ನಗರದ ಭೂತಪ್ಪನ ಗುಡಿಯ ಕಾರ್ತಿಕೋತ್ಸವ ಇಂದು ಸಂಭ್ರಮದಿಂದ ನಡೆಯಿತು. ಚಿತ್ರದುರ್ಗ ಜಿಲ್ಲೆ ಹಿರಿಯೂರು ನಗರದ ಗಾಂಧಿ ವೃತ್ತದ ಪುರಾತನ ದೇವಸ್ಥಾನ ಭೂತಪ್ಪನ ಗುಡಿಯ ಕಾರ್ತಿಕೋತ್ಸವ ಇಂದು ಸಂಜೆ 7 ಗಂಟೆಗೆ ಹಮ್ಮಿಕೊಂಡಿದ್ದು ಈ ಹಿನ್ನೆಲೆ ದೇವಸ್ಥಾನವನ್ನ ಸಂಪೂರ್ಣ ದೀಪಾಲಂಕಾರ ಮಾಡಿದ್ದು ದೇವಸ್ಥಾನದ ವತಿಯಿಂದ ವಿವಿಧ ಬಗೆಯ ಪೂಜೆ ಪುನಸ್ಕಾರಗಳು ನಡೆದಿದ್ದು ನಾನಾ ಬಾಗದಿಂದ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದಿದ್ದು ದೇವಸ್ಥಾನದ ವತಿಯಿಂದ ನೂರಾರು ಭಕ್ತರಿಗೆ ಪ್ರಸಾದ ವಿನಯೋಗ ಸಹ ಹಮ್ಮಿಕೊಳ್ಳಲಾಗಿತ್ತು.