ಶಿವಮೊಗ್ಗ: ದೊಡ್ಡಪೇಟೆ ಠಾಣಾ ವ್ಯಾಪ್ತಿಯ ಸರ್ಕಾರಿ ಬಸ್ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ, ವಾರಸುದಾರರ ಪತ್ತೆಗೆ ಸಹಕರಿಸಲು ಮನವಿ
ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಸರ್ಕಾರಿ ಬಸ್‍ನಿಲ್ದಾಣದಲ್ಲಿ ಸುಮಾರು 40-45 ವರ್ಷದ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದ್ದು, ಶವವನ್ನು ಮೆಗ್ಗಾನ್ ಆಸ್ಪತ್ರೆ ಶವಾಗಾರದಲ್ಲಿರಿಸಲಾಗಿದೆ. ಈ ಮೃತವ್ಯಕ್ತಿಯು 5.8 ಅಡಿ ಎತ್ತರವಿದ್ದು, ದುಂಡುಮುಖ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ ಹೊಂದಿರುತ್ತಾನೆ. ಮೃತನ ಎಡಗೈ ಮುಂಗೈನ ಒಳಭಾಗದಲ್ಲಿ ಮಂಜುಳಾ ಎಂಬ ಇಂಗ್ಲೀಷ್ ಪದಗಳ ಹಚ್ಚೆ ಗುರುತು ಮತ್ತು ಬಲಗೈನ ಮುಂಗೈ ಒಳಭಾಗದಲ್ಲಿ ತಾಯಿ, ತಂಗಿ ಎಂಬ ಪದದ ಹಚ್ಚೆ ಗುರುತು ಹಾಗೂ ರೇಣುಕಾದೇವಿ ದೇವರ ಚಿತ್ರದ ಹಚ್ಚೆ ಗುರುತು ಇರುತ್ತದೆ. ಈತನ ಹೆಸರು, ವಿಳಾಸ ಪತ್ತೆಯಾಗಿರುವುದಿಲ್ಲ. ಮೃತ ವ್ಯಕ್ತಿ ವಾರಸ್ಸುದಾರರು ಪತ್ತೆಯಾದಲ್ಲಿ ದೊಡ್ಡ ಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414/ 9611761255 ನ್ನು ಸಂಪರ್ಕಿಸಿ ಎಂದಿದೆ.