ಮಂಡ್ಯ: ಕಾಳಿಕಾಂಭ ಸ್ಲಂ ನಿವಾಸಿಗಳಿಗೆ ಮನೆ ನಿರ್ಮಿಸಲು ಆಗ್ರಹಿಸಿ ನಗರದ ಕೊಳಗೇರಿ ಅಭಿವೃದ್ಧಿ ಮಂಡಳಿ ಕಚೇರಿ ಪ್ರತಿಭಟನೆ
Mandya, Mandya | Oct 13, 2025 ಕಾಳಿಕಾಂಭ ಸ್ಲಂ ನಿವಾಸಿಗಳಿಗೆ ಮನೆ ನಿರ್ಮಿಸಲು ಆಗ್ರಹಿಸಿ ನಗರದ ಕೊಳಗೇರಿ ಅಭಿವೃದ್ಧಿ ಮಂಡಳಿ ಕಚೇರಿ ಪ್ರತಿಭಟನೆ ನಡೆಯುತ್ತಿದೆ. ಸೋಮವಾರ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ, ಜನಶಕ್ತಿ, ಮಹಿಳಾ ಮುನ್ನಡೆಯ ಮುಖಂಡರು, ಸದಸ್ಯರು ಸರ್ಕಾರ, ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸೆ.19ರಂದು ಉಚ್ಚ ನ್ಯಾಯಾಲಯ ಶ್ರಮಿಕ ಜನರ ಪರವಾಗಿ ತೀರ್ಪು ನೀಡಿದರೂ ಮನೆ ನಿರ್ಮಾಣಕ್ಕೆ ಮುಂದಾಗಿಲ್ಲ ಎಂದರು. ತುರ್ತಾಗಿ ಮನೆ ನಿರ್ಮಾಣಕ್ಕೆ ಮುಂದಾಗುವಂತೆ ಕೊಳಗೇರಿ ಅಭಿವೃದ್ದಿ ಮಂಡಳಿ ಅಧಿಕಾರಿಗಳಿಗೆ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸಿದ್ದರಾಜು, ಜಗದೀಶ, ಸುಮತಿ, ಲಕ್ಷ್ಮಿ ಸೇರಿದಂತೆ ಹಲವರಿದ್ದರು.